Saturday, January 31, 2009

ಸಂಗಾತಿ

ಹೇ ಬೊಗಸೆ ಕಂಗಳ ಹುಡುಗಿ
ಜಿಂಕೆಯಂತೆ ನಲಿಯುವ ಬೆಡಗಿ

ಮನ ಸೋತಿತು ನಿನ್ನಂದಕೆ
ತನು ಬಯಸಿತು ನಿನ್ನೊಲವ
ಹೇ ಬೊಗಸೆ ಕಂಗಳ ಹುಡುಗಿ
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?

ನಿನ್ನ ಕಂಡ ಕ್ಷಣದಿಂದ ಅನುರಾಗ ಮೂಡಿತು
ಎಲ್ಲೆಲ್ಲೂ ನಿನ್ನ ಚಿತ್ರ ತೇಲಿತು
ಕುಳಿತಲ್ಲಿ ನಿಂತಲ್ಲಿ ನಿನ್ನ ನೆನಪು ಕಾಡಿತು
ಹೇಳು ಹುಡುಗಿ ಹೇಳು!
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?