ಹೇ ಬೊಗಸೆ ಕಂಗಳ ಹುಡುಗಿ
ಜಿಂಕೆಯಂತೆ ನಲಿಯುವ ಬೆಡಗಿ
ಮನ ಸೋತಿತು ನಿನ್ನಂದಕೆ
ತನು ಬಯಸಿತು ನಿನ್ನೊಲವ
ಹೇ ಬೊಗಸೆ ಕಂಗಳ ಹುಡುಗಿ
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?
ನಿನ್ನ ಕಂಡ ಕ್ಷಣದಿಂದ ಅನುರಾಗ ಮೂಡಿತು
ಎಲ್ಲೆಲ್ಲೂ ನಿನ್ನ ಚಿತ್ರ ತೇಲಿತು
ಕುಳಿತಲ್ಲಿ ನಿಂತಲ್ಲಿ ನಿನ್ನ ನೆನಪು ಕಾಡಿತು
ಹೇಳು ಹುಡುಗಿ ಹೇಳು!
ನೀನಾಗುವೆಯ ನನ್ನ ಬಾಳ ಪಯಣದ ಸಂಗಾತಿ?
Saturday, January 31, 2009
Sunday, October 5, 2008
ನನ್ನಿಯನ ಜೊತೆಯಲ್ಲಿ
ಮುಂಜಾನೆಯ ಮಂಜಿನಲಿ
ತಂಗಾಳಿಯ ತಂಪಿನಲಿ
ವನರಾಶಿಯ ಸೊಬಗಿನಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ
ಪ್ರಕೃತಿಯ ಮಡಿಲಲ್ಲಿ
ಸುರಿವ ಸೋನೆಯಡಿಯಲ್ಲಿ
ಮೈ ನಡುಗಿಸುವ ಚಳಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ
ಕಂಗಳಿಗೆ ಮುದನೀಡುವ ಹಸಿರಿನ ತೋಟದಲಿ
ಕಿವಿಗೆ ಇಂಪಾಗಿ ಕೇಳುವ
ಕೋಗಿಲೆಯ ಗಾನದಲಿ
ಮನಸ್ಸಿಗೆ ಕಚಗುಳಿಇಡುವ
ನಿಸರ್ಗದ ಅಡಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲಿ.
Wednesday, September 24, 2008
ಸವಿನುಡಿ
ನನ್ನೆದೆ ಗೂಡಿನಲಿ ಬೆಚ್ಚಗೆ ಕುಳಿತಿರುವ ನನ್ನಿನಿಯ
ಒಲವಿನ ಸವಿ ಮಾತನು ಹೇಳುವೆ
ಆಲಿಸು ಓ ಗೆಳೆಯ,
ನಮ್ಮಿಬ್ಬರ ಪ್ರೀತಿ ಮಧುರ
ನಮ್ಮಿಬ್ಬರ ಪ್ರೇಮ ಅಮರ
ನಮ್ಮೀ ಮಧುರ ಬಾಂಧವ್ಯ
ಇಂಪಾದ ವೀಣೆಯ ಝೇಂಕಾರದಂತೆ
ಮೆಲ್ಲನೆ ಸಾಗುತ್ತಾ
ಚಿರನೂತನವಾಗಿ ನುಡಿಯುತ್ತಿರಲಿ
ಓ ನನ್ನ ಹೃದಯ ಸಾಮ್ರಾಜ್ಯದ ಒಡೆಯ
ಆಲಿಸಿದೆಯಾ ನನ್ನೀ ಸವಿ ನುಡಿಯಾ?
ಒಲವಿನ ಸವಿ ಮಾತನು ಹೇಳುವೆ
ಆಲಿಸು ಓ ಗೆಳೆಯ,
ನಮ್ಮಿಬ್ಬರ ಪ್ರೀತಿ ಮಧುರ
ನಮ್ಮಿಬ್ಬರ ಪ್ರೇಮ ಅಮರ
ನಮ್ಮೀ ಮಧುರ ಬಾಂಧವ್ಯ
ಇಂಪಾದ ವೀಣೆಯ ಝೇಂಕಾರದಂತೆ
ಮೆಲ್ಲನೆ ಸಾಗುತ್ತಾ
ಚಿರನೂತನವಾಗಿ ನುಡಿಯುತ್ತಿರಲಿ
ಓ ನನ್ನ ಹೃದಯ ಸಾಮ್ರಾಜ್ಯದ ಒಡೆಯ
ಆಲಿಸಿದೆಯಾ ನನ್ನೀ ಸವಿ ನುಡಿಯಾ?
ಮನಸು
ಮನದ ಇಬ್ಬನಿ ಕರಗಿತು
ಮನದಿ ಸಂತಸ ಅರಳಿತು
ಹೃದಯ ಹಾಡಿತು
ತನುವು ಕುಣಿಯಿತು
ಎದೆಯಲಿ ಅನುರಾಗ ಮೂಡಿತು
ಒಲವ ಬಯಸಿತು
ಹರುಷ ಉಕ್ಕಿತು
ಮನವು ಬಾನಂಗಳದಿ ತೇಲಿತು
ಹಕ್ಕಿಯ ಹಾಗೆ ಹಾರಿತು
ಕನಸು ಕಣ್ಣಲಿ ಕುಣಿಯಿತು
ಮನಸು ಮನದಿನಿಯನ ಸನಿಹ ಬಯಸಿತು.
ಮನದಿ ಸಂತಸ ಅರಳಿತು
ಹೃದಯ ಹಾಡಿತು
ತನುವು ಕುಣಿಯಿತು
ಎದೆಯಲಿ ಅನುರಾಗ ಮೂಡಿತು
ಒಲವ ಬಯಸಿತು
ಹರುಷ ಉಕ್ಕಿತು
ಮನವು ಬಾನಂಗಳದಿ ತೇಲಿತು
ಹಕ್ಕಿಯ ಹಾಗೆ ಹಾರಿತು
ಕನಸು ಕಣ್ಣಲಿ ಕುಣಿಯಿತು
ಮನಸು ಮನದಿನಿಯನ ಸನಿಹ ಬಯಸಿತು.
Tuesday, September 9, 2008
ಅಂದ ಚಂದ
ಕೋಗಿಲೆ "ಕುಹು ಕುಹು" ಧ್ವನಿಚಂದ
ಮಗುವಿನ "ಕಿಲ ಕಿಲ"ನಗು ಅಂದ
ಹಕ್ಕಿಗಳ "ಚಿಲಿ ಪಿಲಿ"ಕಲರವ ಚಂದ
ನವಿಲಿನ "ತಕದಿಮಿ"ನಾಟ್ಯವು ಅಂದ
ವನರಾಶಿಯ "ಹಸಿರಿನ"ಸೊಬಗು ಚಂದ
ಆದರೆ ನನಗೆ "ನನ್ನ ನಲ್ಲನ ನೋಟವು ಬಲುಚಂದ"
ಮಗುವಿನ "ಕಿಲ ಕಿಲ"ನಗು ಅಂದ
ಹಕ್ಕಿಗಳ "ಚಿಲಿ ಪಿಲಿ"ಕಲರವ ಚಂದ
ನವಿಲಿನ "ತಕದಿಮಿ"ನಾಟ್ಯವು ಅಂದ
ವನರಾಶಿಯ "ಹಸಿರಿನ"ಸೊಬಗು ಚಂದ
ಆದರೆ ನನಗೆ "ನನ್ನ ನಲ್ಲನ ನೋಟವು ಬಲುಚಂದ"
ದುಡುಕು
ಅವನು ವರ್ಣಿಸುತ್ತಿದ್ದನು
ತನ್ನ ನಲ್ಲೆಯ ಹತ್ತಿರ
ಆಹಾ!! ಅದೆಂಥಾ ಸುಂದರವಾದ ವದನ
ಮುದ್ದಾದ ಪುಟ್ಟ ಕೆಂಪು ತುಟಿಗಳು
ಅರಳಿದ ಬಟ್ಟಲು ಕಂಗಳು
ಸೇಬುಗೆನ್ನೆ! ಸುಳಿಗಲ್ಲ!!
ಎಂದು ವರ್ಣಿಸುತ್ತಿರಲು
ನಲ್ಲೆ ಕೋಪಂದಿಂದ ಕುದಿಯುತ್ತ
ಹಾಗಾದರೆ ನಿನಗೆ ವಿಛ್ಛೇದನ ಕೊಡುವೆ
ನನ್ನ ನಿನ್ನ ಸಂಬಂಧ ಕಡಿಯಿತು
ಎಂದು ನಲ್ಲ ಹೇಳುತ್ತಿದ್ದ ಮಾತು ಲಕ್ಷಿಸದೆ
ದುಡು ದುಡು ನಡೆದಳು ತೌರಿಗೆ
ನಂತರ ತಿಳಿಯಿತು ತನ್ನ ನಲ್ಲ ವರ್ಣಿಸುತ್ತಿದ್ದದ್ದು
ಒಂದು" ಮಗುವಿನ ವದನ" ವನ್ನು ಎಂದು.
ತನ್ನ ನಲ್ಲೆಯ ಹತ್ತಿರ
ಆಹಾ!! ಅದೆಂಥಾ ಸುಂದರವಾದ ವದನ
ಮುದ್ದಾದ ಪುಟ್ಟ ಕೆಂಪು ತುಟಿಗಳು
ಅರಳಿದ ಬಟ್ಟಲು ಕಂಗಳು
ಸೇಬುಗೆನ್ನೆ! ಸುಳಿಗಲ್ಲ!!
ಎಂದು ವರ್ಣಿಸುತ್ತಿರಲು
ನಲ್ಲೆ ಕೋಪಂದಿಂದ ಕುದಿಯುತ್ತ
ಹಾಗಾದರೆ ನಿನಗೆ ವಿಛ್ಛೇದನ ಕೊಡುವೆ
ನನ್ನ ನಿನ್ನ ಸಂಬಂಧ ಕಡಿಯಿತು
ಎಂದು ನಲ್ಲ ಹೇಳುತ್ತಿದ್ದ ಮಾತು ಲಕ್ಷಿಸದೆ
ದುಡು ದುಡು ನಡೆದಳು ತೌರಿಗೆ
ನಂತರ ತಿಳಿಯಿತು ತನ್ನ ನಲ್ಲ ವರ್ಣಿಸುತ್ತಿದ್ದದ್ದು
ಒಂದು" ಮಗುವಿನ ವದನ" ವನ್ನು ಎಂದು.
Wednesday, July 9, 2008
ಆಸರೆ
ಬಾಳೆಂಬ ತೋಟದ ಬಳ್ಳಿಯಾದ ನನಗೆ
ದೇಹವೆಂಬ ಮರವಾಗಿ ಆಸರೆ ಯಾದೆ.
ನಿನ್ನ ಪ್ರೀತಿಯೆಂಬ ತಂಪಿನ ನೆರಳಲ್ಲಿ
ಜೀವನವೆಲ್ಲಾ ಕಳೆಯುವ ಆಸೆ.
ದೇಹವೆಂಬ ಮರವಾಗಿ ಆಸರೆ ಯಾದೆ.
ನಿನ್ನ ಪ್ರೀತಿಯೆಂಬ ತಂಪಿನ ನೆರಳಲ್ಲಿ
ಜೀವನವೆಲ್ಲಾ ಕಳೆಯುವ ಆಸೆ.
Subscribe to:
Posts (Atom)