ಬಾಳೆಂಬ ತೋಟದ ಬಳ್ಳಿಯಾದ ನನಗೆ
ದೇಹವೆಂಬ ಮರವಾಗಿ ಆಸರೆ ಯಾದೆ.
ನಿನ್ನ ಪ್ರೀತಿಯೆಂಬ ತಂಪಿನ ನೆರಳಲ್ಲಿ
ಜೀವನವೆಲ್ಲಾ ಕಳೆಯುವ ಆಸೆ.
Wednesday, July 9, 2008
ವಸಂತ
ವಸಂತ ಮಾಸ ಬಂದಿತು
ಮನಕೆ ಹರುಷ ತಂದಿತು
ಮರಬಳ್ಳಿಗಳ ಚಿಗುರಿನ ಹಸಿರಿನ ಕಂಪು
ಎಲ್ಲೆಲ್ಲೂ ಕೋಗಿಲೆ ಗಾನದ ಇಂಪು
ಋತುಗಳ ರಾಜನ ಆಗಮನ
ಮನಸ್ಸಿಗೆ ಆನಂದದ ನಂದನವನ
ಕಣ್ಮನ ತಣಿಸುವ ಹೂವಿನ ಅಂದ
ಎಲ್ಲೆಲ್ಲೂ ದುಂಬಿಗೆ ಆನಂದದ ಮಕರಂದ
ವಸಂತ ಮಾಸ ಬಂದಿತು
ಮನಕೆ ಹರುಷ ತಂದಿತು.
ಮನಕೆ ಹರುಷ ತಂದಿತು
ಮರಬಳ್ಳಿಗಳ ಚಿಗುರಿನ ಹಸಿರಿನ ಕಂಪು
ಎಲ್ಲೆಲ್ಲೂ ಕೋಗಿಲೆ ಗಾನದ ಇಂಪು
ಋತುಗಳ ರಾಜನ ಆಗಮನ
ಮನಸ್ಸಿಗೆ ಆನಂದದ ನಂದನವನ
ಕಣ್ಮನ ತಣಿಸುವ ಹೂವಿನ ಅಂದ
ಎಲ್ಲೆಲ್ಲೂ ದುಂಬಿಗೆ ಆನಂದದ ಮಕರಂದ
ವಸಂತ ಮಾಸ ಬಂದಿತು
ಮನಕೆ ಹರುಷ ತಂದಿತು.
Saturday, July 5, 2008
ಮುನ್ನಾರ್ ಪ್ರವಾಸ ಕಥನ
ಆದರೆ ನಮಗೆ ನಂತರ ತಿಳಿಯಿತು ಅಲ್ಲಿ ಕಾಣಸಿಗುವ ಸ್ಥಳಗಳೆಲ್ಲಾ ಸುಂದರವೆಂದು. ನಾವು ಮೊದಲು ಹೋಗಿದ್ದು ಟಾಪ್ ಸ್ಟೇಶನ್ ಎಂಬ ಒಂದು ಸುಂದರ ತಾಣಕ್ಕೆ. ಇದು ಕೇರಳ ಮತ್ತು ತಮಿಳುನಾಡಿನ ಬಾರ್ಡರ್ನಲ್ಲಿದೆ. ಅಲ್ಲಿ ಒಂದು ಕಿ.ಮೀ ದೂರ ನಡೆದು ಹೋದರೆ ಟಾಪ್ ಸ್ಟೇಶನ್ ( ವ್ಯೂ ಪಾಯಿಂಟ್) ಸಿಗುತ್ತದೆ. ವ್ಹಾ! ಎಲ್ಲಿ ನಿಂತು ನೋಡಿದರೆ ರುದ್ರರಮಣೀಯ ದೃಶ್ಯ ನಮಗೆ ಗೋಚರಿಸುತ್ತದೆ. ಎತ್ತರವಾದ ಬೆಟ್ಟದ ತುದಿಗೆ ಮುತ್ತಿಡುತ್ತಿರುವ ಬೆಳ್ಳಿ ಮೋಡಗಳ ಸಾಲು, ವನರಾಶಿಯ ಹಸಿರಿನ ಸೊಬಗು ನಮ್ಮ ಮನಸ್ಸಿಗೆ ಕಚಗುಳಿ ಇಡುತ್ತದೆ. ನಂತರ ನಾವು ಅಲ್ಲಿಂದ ಕುಂದಲ ಡ್ಯಾಂ, ಎಕೊ ಪಾಯಿಂಟ್ ಮುಂತಾದ ಸ್ಥಳಗಳನ್ನು ವೀಕ್ಷಿಸಿ ಹೊಟೆಲ್ ಗೆ ವಾಪಸ್ಸಾದೆವು.
ಮರುದಿನ ಮುಂಜಾನೆ ಕೇರಳದ ಅತ್ಯಂತ ಎತ್ತರವಾದ ಪ್ರದೇಶ, ಅತ್ಯಂತ ಸುಂದರ ಸ್ಥಳ ರಾಜ್ ಮಲೈ ಗೆ ಭೇಟಿ ನೀಡಿದೆವು. ಇದು ದಕ್ಷಿಣ ಭಾರತದ ಅತಿ ಎತ್ತರದ ಪ್ರದೇಶ. ಇದು ನ್ಯಾಶನಲ್ ಪಾರ್ಕ್ ಕೂಡ. ಇಲ್ಲಿಗೆ ೧೫ ಕಿ ಮಿ. ಕಾರನಲ್ಲಿ ಹೋಗಿ ನಂತರ ಟಿಕೆಟ್ ಪಡೆದು ಅವರ ಬಸ್ಸಿನಲ್ಲಿ ಹೋಗಬೇಕು. ಮೇಲೆ ಹೋಗುವಾಗ ಅತ್ಯಂತ ಎಚ್ಚರಿಕೆಯಿಂದ ಹೋಗಬೇಕು. ಏಕೆಂದರೆ ಅತ್ಯಂತ ಕಿರಿದಾದ ರಸ್ತೆ, ಒಂದು ಕಡೆ ಆಳವಾದ ಪ್ರಪಾತ ಮತ್ತೊಂದು ಕಡೆ ಅತ್ಯಂತ ಎತ್ತರದ ಟೀ ಬೆಟ್ಟಗಳ ಸಾಲು. ಮೇಲೆ ಹೋದಂತೆಲ್ಲಾ ತುಂಬಾ ಭಯವೆನಿಸುತ್ತದೆ. ಚಾಲಕ ಸ್ವಲ್ಪ ನಿಯಂತ್ರಣ ತಪ್ಪಿದರೂ ಪ್ರಪಾತಕ್ಕೆ ಬಸ್ಸು ಉರುಳುವುದು ಗ್ಯಾರಂಟಿ. ಹಾಗೆ ಎಷ್ಟು ರಮಣೀಯ ನೋಟವೋ ಅಷ್ಟೇ ಭೀಕರ ಕೂಡ ಹೌದು. ನಮ್ಮ ಬಸ್ಸು ಮೆಲ್ಲನೆ ಸಾಗುತ್ತಿತ್ತು. ನಾವು ಸುಂದರ ದೃಶ್ಯಗಳನ್ನು ನೋಡುತ್ತಾ, ಹೋಗುತ್ತಿರುವಾಗ ಮಧ್ಯ ಒಂದು ಸುಂದರ ಜಲಪಾತ ನಮ್ಮನ್ನು ಕಣ್ಸೆಳೆಯುವಂತೆ ಮಾಡುತ್ತದೆ. ನಂತರ ಮೇಲೆ ಹೋದಂತೆಲ್ಲಾ ಮಂಜುಸುರಿಯುವುದು ಹೆಚ್ಚುತ್ತಾ ಹೋಗುತ್ತದೆ. ಆ ದೃಶ್ಯವನ್ನು ನೋಡಲು ಬಲು ಸೊಗಸು. ಎರಡು ಕಣ್ಣು ಸಾಲುವುದಿಲ್ಲ ಎನಿಸುತ್ತದೆ. ನಂತರ ೨ ಕಿ ಮೀ ನಡೆದು ಹೋಗಬೇಕು. ಆಗ ಮಂಜು ಸುರಿಯುವ ಪ್ರಮಾಣ ಇನ್ನೂ ಹೆಚ್ಚಿ, ತಂಪಾದ ಹಾಗು ಚಳಿಯಾದ ವತಾವರಣ ಸೃಷ್ಟಿಯಾಗುತ್ತದೆ. ನಿಸರ್ಗದ ಸುಂದರ ದೃಶ್ಯಗಳು ಕಾಣುತ್ತದೆ. ಇದನ್ನೆಲ್ಲಾ ವೀಕ್ಷಿಸಿ ನಮ್ಮ ಪಯಣ ಸಾಗಿದ್ದು Tea Factory ಯತ್ತ. ಅಲ್ಲಿ ಟೀ ಎಲೆಗಳಿಂದ ಹೇಗೆ ಟೀ ಪೌಡರ್ ತಯಾರಿಸುತ್ತಾರೆ ಎಂಬ ವಿವರಣೆ ಸಿಗುತ್ತದೆ. ಸ್ವತಹ: ನಾವೇ ಟೀ ಪೌಡರ್ ತಯಾರಾಗುವ ರೀತಿ ನೋಡಬಹುದು. ನಂತರ ಇಂನ್ನೊದು ವ್ಯೂ ಪಾಯಿಂಟ್ ನೋಡಿ ಹೊಟೆಲ್ ಗೆ ವಾಪಸ್ಸಾದೆವು.ದೇಹಕ್ಕೆ ದಣಿವಾಗಿದ್ದರೂ, ನಮ್ಮ ಮನಸ್ಸೆಲ್ಲಾ ಸಂತಸದಿಂದ ಕುಣಿಯುತ್ತಿತ್ತು. ಆಗ ನನಗೆ ಸಿನಿಮಾದ ಒಂದು ಹಾಡಿನ ಸಾಲು ನೆನಪಾಯಿತು. "ಈ ದಿನ ಖುಶಿಯಾಗಿದೆ.... ನನಗೇಕೆ ಹೀಗಾಗಿದೆ?". ಅದನ್ನು ಮನಸ್ಸಿನಲ್ಲೇ ಗುನುಗಿ ಸಂತಸದಿಂದ ಬೆಂಗಳೂರಿಗೆ ವಾಪಸ್ಸಾದೆವು.
Wednesday, July 2, 2008
ಸೃಷ್ಠಿ
ಬಾನಂಗಳದಲ್ಲಿ ಮಿನುಗುವ
ನಕ್ಷತ್ರಗಳ ಗುಂಪು
ಇದಕ್ಕೆ ಕಲಶವಿಟ್ಟಂತೆ
ಕಣ್ಮನ ತಣಿಸುವ
ಚಂದ್ರಮನ ತಂಪು
ಆಗಸದ ತುಂಬಾ
ಬೆಳ್ಳಿ ಮೋಡಗಳ ಚಿತ್ತಾರ
ಮುಗಿಲು ಚುಂಬಿಸುವಂತೆ
ಬೆಳೆದು ನಿಂತ ಮರ ಗಿಡಗಳ ಸಾಲು
ಮನ ಮೂಕವಾಯಿತು!
ಪ್ರಕೃತಿಯ ಈ ಸೃಷ್ಠಿ ವೈಚಿತ್ರ್ಯಕೆ!!
ಏನಿರಬಹುದು? ಈ ಸೃಷ್ಠಿಯ ಮರ್ಮ???
ನಕ್ಷತ್ರಗಳ ಗುಂಪು
ಇದಕ್ಕೆ ಕಲಶವಿಟ್ಟಂತೆ
ಕಣ್ಮನ ತಣಿಸುವ
ಚಂದ್ರಮನ ತಂಪು
ಆಗಸದ ತುಂಬಾ
ಬೆಳ್ಳಿ ಮೋಡಗಳ ಚಿತ್ತಾರ
ಮುಗಿಲು ಚುಂಬಿಸುವಂತೆ
ಬೆಳೆದು ನಿಂತ ಮರ ಗಿಡಗಳ ಸಾಲು
ಮನ ಮೂಕವಾಯಿತು!
ಪ್ರಕೃತಿಯ ಈ ಸೃಷ್ಠಿ ವೈಚಿತ್ರ್ಯಕೆ!!
ಏನಿರಬಹುದು? ಈ ಸೃಷ್ಠಿಯ ಮರ್ಮ???
Subscribe to:
Comments (Atom)
