
ಮುಂಜಾನೆಯ ಮಂಜಿನಲಿ
ತಂಗಾಳಿಯ ತಂಪಿನಲಿ
ವನರಾಶಿಯ ಸೊಬಗಿನಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ
ಪ್ರಕೃತಿಯ ಮಡಿಲಲ್ಲಿ
ಸುರಿವ ಸೋನೆಯಡಿಯಲ್ಲಿ
ಮೈ ನಡುಗಿಸುವ ಚಳಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ
ಕಂಗಳಿಗೆ ಮುದನೀಡುವ ಹಸಿರಿನ ತೋಟದಲಿ
ಕಿವಿಗೆ ಇಂಪಾಗಿ ಕೇಳುವ
ಕೋಗಿಲೆಯ ಗಾನದಲಿ
ಮನಸ್ಸಿಗೆ ಕಚಗುಳಿಇಡುವ
ನಿಸರ್ಗದ ಅಡಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲಿ.