Sunday, October 5, 2008

ನನ್ನಿಯನ ಜೊತೆಯಲ್ಲಿ

ಮುಂಜಾನೆಯ ಮಂಜಿನಲಿ
ತಂಗಾಳಿಯ ತಂಪಿನಲಿ
ವನರಾಶಿಯ ಸೊಬಗಿನಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ

ಪ್ರಕೃತಿಯ ಮಡಿಲಲ್ಲಿ
ಸುರಿವ ಸೋನೆಯಡಿಯಲ್ಲಿ
ಮೈ ನಡುಗಿಸುವ ಚಳಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲ್ಲಿ

ಕಂಗಳಿಗೆ ಮುದನೀಡುವ ಹಸಿರಿನ ತೋಟದಲಿ
ಕಿವಿಗೆ ಇಂಪಾಗಿ ಕೇಳುವ
ಕೋಗಿಲೆಯ ಗಾನದಲಿ
ಮನಸ್ಸಿಗೆ ಕಚಗುಳಿಇಡುವ
ನಿಸರ್ಗದ ಅಡಿಯಲ್ಲಿ
ಕುಳಿತಿದ್ದೆನು ನನ್ನಿಯನ ಜೊತೆಯಲ್ಲಿ
ಟೀ ತೋಟದ ನಡುವಿನಲಿ.

11 comments:

Unknown said...

ok chennagide.

ಯಜ್ಞೇಶ್ (yajnesh) said...

ನಂದೂ ಅದೇ... ಆದ್ರೆ ನಂದು ನನ್ನ ಹೆಂಡತಿಯ ಜೊತೆ )

ಸೂಪರ್ ಶ್ರೀ

ತೇಜಸ್ವಿನಿ ಹೆಗಡೆ said...

ಒಂದು ರೀತಿಯ ಹೊಸತನವಿದೆ ಕವನದಲಿ. ಶುಭವಾಗಲಿ.

Shree said...

dhanyavaadagalu.tejasvini hegade avare.

Shree said...

@shreeshum and @yajnesh

dhanyavadagalu

ಮನಸ್ವಿ said...

ಸುಂದರ ಸರಳ ಕವನ... ಎಲ್ಲಾ ಚನ್ನಾಗಿದೆ
ನನ್ನಿಯನ?? ನನ್ನ ಇನಿಯನ ಎಂಬುದು ಅರ್ಥವಾಗುತ್ತದೆಯಾದರು
ನನ್ನಿನಿಯನ ಎಂದು ಬರೆದಿದ್ದರೆ ಚನ್ನಾಗಿತ್ತು ಎಂಬುದು ನನ್ನ ಅನಿಸಿಕೆ

Shree said...

dhanyavaadagalu abhiprayatilisiddakke manaswiyavare.

Anonymous said...

ಹಾಯ್...

ನೀವು ನಿಮ್ಮ ಇನಿಯನ ಜೊತೆಯಲಿ... .
ಇದ್ದದು ಟೀ... ತೋಟದಲಿ...
ನಿಸರ್ಗ ಮಾತೆಯ ಮಡಿಲಲಿ...
ನಿಮ್ಮ ಪ್ರೇಮ ಅಮರವಾಗಿರಲಿ...

ಎಂದು ಹೇಳುವೆ ಸದಾ ನಿಮಗೆ ಹರಸುತಲಿ...

ಕವನಗಳುತುಂಬಾ ಚೆನ್ನಾಗಿದೆ.

ಆರ್.ರಾಘವೇಂದ್ರ. ಚಳ್ಳಕೆರೆ-577522.
www.chitharadurga.com
http://durgasahityasammelana.blogspot.com
http://banadahoogalu.blogspot.com
http://nannedepreethi.blogspot.com

Laxman (ಲಕ್ಷ್ಮಣ ಬಿರಾದಾರ) said...

ಹಲೋ ಶ್ರೀ ರವರೆ,
ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ .
ನಿಮ್ಮ ಕವನ “ನನ್ನಿನಿಯನ ಜೊತೆಯಲ್ಲಿ” ಕನ್ನಡಫ್ರಭದಲ್ಲಿ ನೊಡಿದೆ.
ತಂಗಾಳಿ ತರಹದ ನಿಮ್ಮ ಕವಿತೆ ಹಿಡಿಸಿತು. ಅದಕ್ಕೆ ನನ್ನ ಆಭಿಪ್ರಾಯ ತಿಳಿಸಬೇಕೆನಿಸಿತು
ಯಾಕೋ ಇತ್ತಿಚಿಗೆ ಬರಿತಾ ಇಲ್ಲ. ತುಂಬಾ ಬಿಜಿನಾ ,
ಬರಿತಾ ಇರಿ ಶ್ರೀ.

: ಲಕ್ಷ್ಮಣ

Link :
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20090120144314&nDate=

dhanyavaadagalu Laxman avare nimma abhipraya tilisiddakke.