Thursday, April 5, 2007

ನೀನೆಂದು ಬರುವೆ ಇನಿಯ?

ಓ ನನ್ನ ಇನಿಯ!
ನೀ ನಿರಲು ನನ್ನ ಸನಿಹ
ನಾ ಕಾದಿಹೆನು ನಿನ್ನ ಬರವ
ನಿನ್ನ ಸವಿ ಮಾತಲಿ ಮರೆಯುವೆ ಜಗವ
ನಿನ್ನ ಪ್ರೀತಿಯಲಿ ಕಾಣುವೆ ಸುಖವ
ನೀನೆಂದು ಬರುವೆ ಇನಿಯ?

ವರ್ಷ ವಸಂತ ಮಾಗಿ ಋತು ಕಳೆಯಿತು
ನಿನ್ನ ದಾರಿ ಕಾದು ಕಾದು ಬಳಲಿದೆ
ನಿನ್ನ ನೆನಪಲಿ ನೊಂದು ಬೆಂದೆನು
ಓ ನೀನೆಂದು ಬರುವೆ ಇನಿಯ?
ನಾ ಇರುವೆ ನಿನ್ನ ಸನಿಹ.

ವಿರಹದುರಿಯಲಿ ದೇಹ ದಹಿಸಿತು
ನಿನ್ನ ದಾರಿ ನೋಡುವ ಕಣ್ಣು ಕುಗ್ಗಿತು
ದೇಹದ ಕಣ ಕಣವೂ ನಿನ್ನ ಹೆಸರು ಮಿಡಿಯಿತು
ಓ ನೀನೆಂದು ಬರುವೆ ಇನಿಯ?
ನಾ ಇರುವೆ ನಿನ್ನ ಸನಿಹ.

2 comments:

venu said...

Hello Jayashri

A kavana neene bardidda.... Chennagi iddu... keep it up

Shree said...

houdu nane barediddu.thanks gopalbhavayya.